ರೂ.3000 ರಿಂದ ಪ್ರಾರಂಭವಾಗುವ ಚಿನ್ನದ ಸಾಲಗಳು. ಅತಿಕಡಿಮೆ ದಾಖಲಾತಿ ಕಾರ್ಯದೊಂದಿಗೆ
ಇಂದು ನೀವು ಎಷ್ಟು ಮೊತ್ತದ ಚಿನ್ನದ ಸಾಲವನ್ನು ಪಡೆಯಬಹುದು ಎಂಬುದನ್ನು ಇಲ್ಲಿ ನೋಡಬಹುದು
ಎಷ್ಟು ಚಿನ್ನದ ಅಗತ್ಯವಿದೆ ಎಂದು ನೋಡಲು ಮೊತ್ತ ಮತ್ತು ಕ್ಯಾರೆಟ್ ಮೌಲ್ಯವನ್ನು ನಮೂದಿಸಿ.
Enter your gold weight (in grams) and carat value to see your eligible amount.
Gold Weight: 0 grams
Loan Amount: ₹0
Carat: 22
ನಮ್ಮ ಇಲ್ಲಿಯವರೆಗಿನ ಪಯಣ
ಭಾರತದ ಅತ್ಯುತ್ತಮ NBFC ಗಳಲ್ಲಿ ಒಂದಾಗಿ 76 ವರ್ಷಗಳಿಗೂ ಹೆಚ್ಚಿನ ಪರಂಪರೆ.
ನಮ್ಮ ಚಿನ್ನದ ಸಾಲದ ಮುಖ್ಯಾಂಶಗಳು

ತ್ವರಿತ ವಿತರಣೆ*

ದಿನವಾರು ಬಡ್ಡಿ ದರ*

ಪ್ರತಿ ಗ್ರಾಂ ಚಿನ್ನಕ್ಕೆ ಗರಿಷ್ಠ ಸಾಲ*

ಕಡಿಮೆ ಬಡ್ಡಿದರಗಳು*

ಸುಲಭ ಮರುಪಾವತಿ ಆಯ್ಕೆಗಳು*

ಯಾವುದೇ ಗುಪ್ತ ಶುಲ್ಕಗಳಿಲ್ಲ*
ಮಣಪ್ಪುರಂ ಚಿನ್ನದ ಸಾಲದ ಪ್ರಯೋಜನಗಳು
ಭಾರತದಲ್ಲಿ ಅತ್ಯುತ್ತಮ NBFC ಯಾಗಿ 76 ವರ್ಷಗಳ ಪರಂಪರೆ
ನಿಮ್ಮ ಚಿನ್ನವು 100% ಸುರಕ್ಷಿತ ಮತ್ತು ವಿಮೆ ಮಾಡಲ್ಪಟ್ಟಿದೆ
365 ದಿನಗಳಲ್ಲಿ ಯಾವುದೇ ಸಮಯದಲ್ಲಿ ಮರುಪಾವತಿ*
24x7 ಹೆಚ್ಚುವರಿ ಟಾಪ್-ಅಪ್ ಸೌಲಭ್ಯ*
24x7 ಕಣ್ಗಾವಲು ಮತ್ತು ಮೇಲ್ವಿಚಾರಣೆ*
ಸಂಪೂರ್ಣ ವಿಮೆ ಮಾಡಲಾದ ವಾಲ್ಟ್ ಗಳು
1949 ರಿಂದ ಕನಸುಗಳನ್ನು ನನಸು ಮಾಡುತ್ತಿದ್ದೇವೆ
ನಮ್ಮನ್ನು ನಂಬುವ ಜನರಿಂದ ನೈಜ ಕಥೆಗಳು.
4 ಸುಲಭ ಹಂತಗಳಲ್ಲಿ ಚಿನ್ನದ ಸಾಲವನ್ನು ಪಡೆಯಿರಿ
(ಭಾರತದಲ್ಲಿ ಅತ್ಯುತ್ತಮ NBFC ಯಾಗಿ 76 ವರ್ಷಗಳ ಪರಂಪರೆ)
ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಿ
ನಿಮ್ಮ ಚಿನ್ನದ ಆಭರಣಗಳೊಂದಿಗೆ ನಿಮ್ಮ ಹತ್ತಿರದ ಮಣಪ್ಪುರಂ ಗೋಲ್ಡ್ ಲೋನ್ ಶಾಖೆಗೆ ಭೇಟಿ ನೀಡಿ
ಗ್ರಾಹಕರ ಆನ್‌ಬೋರ್ಡಿಂಗ್
ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ತ್ವರಿತವಾಗಿ ಮತ್ತು ತೊಂದರೆಯಿಲ್ಲದೆ ಪೂರ್ಣಗೊಳಿಸಲು ಮಾನ್ಯವಾದ ಐಡಿ ಪುರಾವೆ ಮತ್ತು ವಿಳಾಸ ಪುರಾವೆಗಳನ್ನು ಒದಗಿಸಿ.
ನಿಮ್ಮ ಚಿನ್ನಕ್ಕೆ ಸೂಕ್ತ ಮೌಲ್ಯವನ್ನು ಪಡೆಯಿರಿ
ನಮ್ಮ ತಜ್ಞರು ಚಿನ್ನದ ಮೌಲ್ಯಮಾಪನ ಮಾಡಿ ಮತ್ತು ಬೆಲೆಯನ್ನು ತೀರ್ಮಾನಿಸಿ ನೀವು ಸಾಧ್ಯವಾದಷ್ಟು ಉತ್ತಮ ಸಾಲದ ಮೊತ್ತವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.
ವಿತರಣೆ ಮತ್ತು ಅನುಮೋದನೆ
ಒಮ್ಮೆಲೆ ಅನುಮೋದನೆ ಪಡೆದ ನಂತರ, ಸಾಲದ ಮೊತ್ತವನ್ನು ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಚಿನ್ನದ ಸಾಲದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ
ಭಾರತದಲ್ಲಿ ಚಿನ್ನದ ಸಾಲ ಪಡೆಯಲು ಯಾವ ದಾಖಲೆಗಳು ಬೇಕಾಗುತ್ತವೆ?
ಭಾರತದಲ್ಲಿ ಚಿನ್ನದ ಸಾಲ ಪಡೆಯಲು, ನಿಮಗೆ ಆಧಾರ್ ಕಾರ್ಡ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ಮತದಾರರ ಗುರುತಿನ ಚೀಟಿಯಂತಹ ಗುರುತಿನ ಪುರಾವೆಗಳು ಮತ್ತು ಯುಟಿಲಿಟಿ ಬಿಲ್ಗಳು, ಪಡಿತರ ಚೀಟಿ ಅಥವಾ ಬಾಡಿಗೆ ಒಪ್ಪಂದದಂತಹ ವಿಳಾಸ ಪುರಾವೆಗಳು ಬೇಕಾಗುತ್ತವೆ. 5 ಲಕ್ಷಕ್ಕಿಂತ ಹೆಚ್ಚಿನ ಸಾಲದ ಮೊತ್ತಕ್ಕೆ, ಪ್ಯಾನ್ ಕಾರ್ಡ್ ಪ್ರತಿಯೂ ಬೇಕಾಗಬಹುದು. ಪೂರ್ಣವಾಗಿ ತುಂಬಿದ ಅರ್ಜಿ ನಮೂನೆ ಮತ್ತು ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ನಂತಹ ಇತರ ದಾಖಲೆಗಳು ಬೇಕಾಗಬಹುದು.
ನನ್ನ ಚಿನ್ನ ಸುರಕ್ಷಿತ ಮತ್ತು ಸುಭದ್ರವಾಗಿದೆಯೇ?
ಹೌದು, ನೀವು ನಿಮ್ಮ ಚಿನ್ನವನ್ನು ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ನಂತಹ ವಿಶ್ವಾಸಾರ್ಹ ಸಾಲದಾತರೊಂದಿಗೆ ಒತ್ತೆ ಇಟ್ಟಾಗ, ಅದನ್ನು ಗರಿಷ್ಠ ಸುರಕ್ಷತೆಯೊಂದಿಗೆ ಸಂಗ್ರಹಿಸಿಡಲಾಗುತ್ತದೆ. ಅಲಾರ್ಮ್ ವ್ಯವಸ್ಥೆಗಳು, ಮೋಷನ್ ಸೆನ್ಸಾರ್ ಗಳು ಮತ್ತು ನಿರ್ಬಂಧಿತ ಪ್ರವೇಶವನ್ನು ಹೊಂದಿರುವ ಸುರಕ್ಷಿತ ಸ್ಟೋರೇಜ್ ವಾಲ್ಟ್ ಗಳಿಂದ ಹಿಡಿದು ವಿಮಾ ರಕ್ಷಣೆ ಮತ್ತು 24/7 ಕಣ್ಗಾವಲುಗಳವರೆಗೆ, ನೀವು ನಮ್ಮನ್ನು ಆರಿಸಿದಾಗ ನಿಮ್ಮ ಚಿನ್ನವು ಸುರಕ್ಷಿತ ಕೈಯಲ್ಲಿರುತ್ತದೆ. ನಿಮ್ಮ ಚಿನ್ನವನ್ನು ಸರಿಯಾಗಿ ನಿರ್ವಹಿಸಲಾಗಿದೆ ಮತ್ತು ಸಂಗ್ರಹಿಸಿಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ NBFC ಗಳಿಗೆ ಕಟ್ಟುನಿಟ್ಟಾದ RBI ನಿಯಮಗಳನ್ನು ಸಹ ಪಾಲಿಸುತ್ತದೆ.
ಚಿನ್ನದ ಸಾಲ ತೆರೆಯಲು ನನಗೆ ಬ್ಯಾಂಕ್ ಖಾತೆ ಅಗತ್ಯವಿದೆಯೇ?
ಹೆಚ್ಚಿನ ಸಾಲದಾತರಿಗೆ ಬ್ಯಾಂಕ್ ಖಾತೆ ಕಡ್ಡಾಯವಾಗಿದೆ. ಆದಾಗ್ಯೂ, ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ನಂತಹ ಸಾಲದಾತರಿಗೆ, ನೀವು ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿಲ್ಲದಿದ್ದರೂ ಸಹ, ರೂ.19,500/- ವರೆಗಿನ ಸಾಲದ ಮೊತ್ತದವರೆಗೆ ನೀವು ಚಿನ್ನದ ಸಾಲವನ್ನು ಪಡೆಯಬಹುದು, ಆದರೆ ಈ ಕೆಳಗಿನ ಕಾರಣಗಳಿಗಾಗಿ ಒಂದು ಬ್ಯಾಂಕ್ ಖಾತೆ ಇರುವುದು ಸೂಕ್ತ ಎಂದು ಶಿಫಾರಸು ಮಾಡಲಾಗಿದೆ –
- ಸಾಲದ ಮೊತ್ತವನ್ನು ಖಾತೆಗೆ ನೇರವಾಗಿ ಜಮಾ ಮಾಡಲಾಗುವುದರಿಂದ ಸುರಕ್ಷಿತ ಮತ್ತು ವೇಗವಾದ ವಿತರಣೆಗೆ ಸಹಾಯಕವಾಗುವುದು.
- ಸಾಲದ ಮೊತ್ತದ ಮೇಲೆ ಯಾವುದೇ ಮಿತಿಯಿಲ್ಲ.
- ಬ್ಯಾಂಕ್ ಖಾತೆ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಆನ್ಲೈನ್ ಅರ್ಜಿಗಳನ್ನು ಅನುಮತಿಸಲಾಗುತ್ತದೆ
ಮಣಪ್ಪುರಂನಲ್ಲಿ ಚಿನ್ನದ ಸಾಲ ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡರೆ, ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ನಿಂದ ಚಿನ್ನದ ಸಾಲ ಪಡೆಯುವುದು ತ್ವರಿತ ಪ್ರಕ್ರಿಯೆಯಾಗಿದೆ. ಒಮ್ಮೆ ನೀವು ಸಿದ್ಧರಾದ ನಂತರ, ನೀವು ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು, ನಿಮ್ಮ ಚಿನ್ನವನ್ನು ಮೌಲ್ಯಮಾಪನ ಮಾಡಬಹುದು ಮತ್ತು ನಿಮ್ಮ ದಾಖಲೆಗಳನ್ನು ಸಲ್ಲಿಸಿ ಅತಿ ಕಡಿಮೆ ಸಮಯದಲ್ಲಿ ಅನುಮೋದನೆ ಪಡೆದು ತ್ವರಿತವಾಗಿ ಸಾಲದ ಹಣ ಪಡೆಯಬಹುದು.
ಯಾವುದೇ ಬ್ಯಾಂಕ್/NBFC/ಇತರ ಹಣಕಾಸು ಸಂಸ್ಥೆಗಳಿಂದ ಅಸ್ತಿತ್ವದಲ್ಲಿರುವ ಚಿನ್ನದ ಸಾಲವನ್ನು ಮಣಪ್ಪುರಂಗೆ ಹೇಗೆ ಬದಲಾಯಿಸುವುದು?
- ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಮತ್ತು ಐಡಿ, ವಿಳಾಸ ಪುರಾವೆ ಮತ್ತು ಹಳೆಯ ಸಾಲದ ಸ್ಟೇಟ್ಮೆಂಟ್ ನಂತಹ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
- ಒಮ್ಮೆ ಪೂರ್ಣಗೊಂಡ ನಂತರ, ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ವರ್ಗಾವಣೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿ ಮತ್ತು ಹೊಸ ಸಾಲದ ಮೊತ್ತವನ್ನು ನಿರ್ಧರಿಸಲು ನಿಮ್ಮ ಚಿನ್ನವನ್ನು ಪರಿಶೀಲಿಸಿ.
- ಹೊಸ ಸಾಲದ ಮೊತ್ತವನ್ನು ನೀವು ಒಪ್ಪಿದ ನಂತರ, ವರ್ಗಾವಣೆಯನ್ನು ಪೂರ್ಣಗೊಳಿಸಲು ಹಳೆಯ ಸಾಲವನ್ನು ಮರುಪಾವತಿಸಿ. ವರ್ಗಾವಣೆಯನ್ನು ಪೂರ್ಣಗೊಳಿಸಲು ಹೊಸ ಸಾಲ ಒಪ್ಪಂದಕ್ಕೆ ಸಹಿ ಹಾಕಲು ಮರೆಯದಿರಿ.
ಮಣಪ್ಪುರಂ ಚಿನ್ನದ ಸಾಲ ಮರುಪಾವತಿಯನ್ನು ಆನ್ಲೈನ್ನಲ್ಲಿ ಹೇಗೆ ಪಾವತಿಸುವುದು?
ನೀವು ನಿಮ್ಮ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಚಿನ್ನದ ಸಾಲವನ್ನು ಗ್ರಾಹಕ ಇ-ಸೇವಾ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ (OGL App) ಬಳಸಿಕೊಂಡು ಡೆಬಿಟ್ ಕಾರ್ಡ್ ಬಳಸಿ ಅಥವಾ ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ ಅಥವಾ UPI ಮೂಲಕ ಆನ್ಲೈನ್ನಲ್ಲಿ ಪಾವತಿಸಬಹುದು. ಮಣಪ್ಪುರಂ ಪ್ಲಾಟ್ಫಾರ್ಮ್ನಲ್ಲಿ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.







